ಸಾಮಾಜಿಕ ಹೋರಾಟಗಾರರಿಂದಾಗುವ ರಾಜಕೀಯ ಲಾಭಗಳು
ಸಾಮಾಜಿಕ ಹೋರಾಟಗಾರರಿಂದಾಗುವ ರಾಜಕೀಯ ಲಾಭಗಳು!!!
ರಾಜಕೀಯ ಮತ್ತು ಸಮಾಜ ಎರಡಕ್ಕೂ ಒಂದಕ್ಕೊಂದು ಬಿಟ್ಟುಬಿಡದ ನಂಟಿದೆ.ಹೇಗೆ ರಾಜಕಾರಣಿಗಳು ಸಾಮಾಜಿಕ ಹೋರಾಟಗಾರರನ್ನು ರಾಜಕೀಯಕ್ಕಾಗಿ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ಉದಾಹರಣೆಗಳು ಬಹಳ.
ಸಾಮಾಜಿಕ ಸಂಸ್ಥೆಗಳು ಮತ್ತು ಸಾಮಾಜಿಕ ಹೋರಟಗಾರರು ತಮ್ಮ ವಾಕ್ಚಾತುರ್ಯದಿಂದ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಇದನ್ನೆ ಬಂಡವಾಳವಾಗಿಸಿಕೊಂಡು ರಾಜಕಾರಣಿಗಳು ತಮ್ಮ ಉದ್ದೇಶವನ್ನು ಸಮಾಜಕ್ಕೆ ರವಾನಿಸುತ್ತಿದ್ದಾರೆ.
ಈ ವಿಚಾರವನ್ನು ಎರಡು ರೀತಿಯಲ್ಲಿ ನೋಡಬಹುದು.
ಮೊದಲನೇಯದ್ದು ಇದರಿಂದಾಗುವ ಸಾಮಾಜಿಕ ಕೆಡಕುಗಳು. ಸಾಮಾಜಿಕ ಹೋರಟಗಾರರು ರಾಜಕೀಯ ಪ್ರೇರಿತಗೊಂಡು ತಮ್ಮ ವಾಕ್ಶಕ್ತಿಯಿಂದ ವಿಚಾರಗಳನ್ನು ತಿರುಚಿ ಧರ್ಮ ವಿಚಾರಗಳನ್ನು ತೆಗೆದು ಹುರಿದುಂಬಿಸಿ ರಾಜಕೀಯ ಪ್ರಚಾರವಾದರೆ ದೇಶಕ್ಕೆ ಭಾರೀ ನಷ್ಟವಾದೀತು.
ಎರಡನೇಯದ್ದು ಇದರಿಂದಾಗುವ ಒಳಿತುಗಳು.
ಸಾಮಾಜಿಕ ಹೋರಾಟಗಾರರು ತಮ್ಮಲ್ಲಿರುವ ವಾಕ್ಚಾತುರ್ಯದಿಂದ ತಮಗೆ ತಿಳಿದಿರುವ ವಿಚಾರಗಳನ್ನು ಮತ್ತು ಸಮಾಜಕ್ಕಾಗುತ್ತಿರುವ ಲಾಭ-ನಷ್ಟಗಳನ್ನು ವಿಶ್ಲೇಶಿಸಿ ತಮ್ಮ ಅಭಿಪ್ರಾಯವನ್ನು ಸಮಾಜಕ್ಕೆ ಹೇರದೆ ಜನರಿಗೆ ಸಾಮಾಜಿಕ ಜ್ಞಾನವನ್ನು ಪರಿಚಯಿಸಿ ತಮ್ಮ ವೈಚಾರಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಿರುವುದು.
ಭಾರತವು ಪ್ರಜಾಪ್ರಭುತ್ವ ದೇಶ.ಇಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.ಇದನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಸಮಾಜ ಗುರಿಯಾಗಬಾರದು.
ಅಪ್ರಮೇಯ ಕಟ್ಟಿ
👌
ReplyDeletethanks bro
Delete