ಅರಗಿನರಮನೆ

                                                             ಅರಗಿನರಮನೆ!!!

ಹಾಭಾರತದಲ್ಲಿ ಬರುವ ಅರಗಿನ ಅರಮನೆಯ ಪ್ರಸಂಗವನ್ನು ಮಂಡ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಹೋಲಿಸುವುದಾದರೆ ಹೇಗೆ ದುರ್ಯೋಧನ ತನ್ನ ಅಣ್ಣ-ತಮ್ಮಂದಿರಾದ ಪಾಂಡವರನ್ನು ಜಾತ್ರೆಗಾಗಿ ವಾರಣಾವತಕ್ಕೆ ಕಳುಹಿಸಿ ಪಾಂಡವರನ್ನು ಸಾಯಿಸಲು ಅರಗಿನ ಅರಮನೆಯನ್ನು ನಿರ್ಮಿಸಿ , ಅಲ್ಲಿ ಪಾಂಡವರನ್ನು ಇರುವಂತೆ ಮಾಡಿ , ತನ್ನ ಮಂತ್ರಿಯಾದ ಪುರೋಚನನನ್ನು ಬಿಟ್ಟು ಪಾಂಡವರನ್ನು ಸಾಯಿಸಲು ಆಜ್ಞಾಪಿಸಲಾಯಿತೋ , ಅದೇ ರೀತಿ ಮಂಡ್ಯದಲ್ಲಿನ ರಾಜಕೀಯ ಸನ್ನಿವೇಶವು ಕಂಡುಬರುತ್ತಿದೆ.ಯಾವರೀತಿ ದುರ್ಯೋಧನ ತನ್ನ ಮಂತ್ರಿಯದ ಪುರೋಚನ ಮತ್ತು ತನ್ನ ಸಂಚಾಲಕರನ್ನು ಕಳುಹಿಸಿ ಪಾಂಡವರನ್ನು ಸಾಯಿಸಲು ಕಳುಹಿಸಿದನೋ ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿ ತನ್ನ ಮಗನನ್ನು ಮತ್ತು ತನ್ನ ಮಂತ್ರಿಗಳನ್ನು ಬಿಟ್ಟು ಮಂಡ್ಯ-ದಲ್ಲಿರುವ ತನ್ನ ವಿರೋಧಿಯನ್ನು ಸೋಲಿಸಲು ಹೊರಟಿದ್ದಾರೆ.
ಆದರೆ ಅರಗಿನ ಮನೆಯ ಸನ್ನಿವೇಶದಲ್ಲಿ ಮುಂದಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸದರೆ ದುರ್ಯೊಧನ ತಾನು ಕಳುಹಿಸಿದ ತನ್ನ ಮಂತ್ರಿ ಮತ್ತು ಆತನ ಹಿಂಬಾಲಕರು ಎಷ್ಟೇ ಕಷ್ಟಪಟ್ಟರೂ ಪಾಂಡವರನ್ನು ಸಾಯಿಸಲು ಆಗಲಿಲ್ಲ ಮತ್ತು ಅವನನ್ನು ಸಾಯಿಸಲು ಬಂದಿದ್ದ ಪುರೋಚನ ಮತ್ತು ಸಂಗಡಿಗರು ಆ ಅರಗಿನ ಮನೆಯಲ್ಲೇ ಬೆಂದು ಸತ್ತರು.ಹಾಗಾಗಿಯೇ ದುರ್ಯೋಧನ ಯುದ್ಧ ಮಾಡಲೇ ಬೇಕಾದ ಪರಿಸ್ಥಿತಿ ಎದುರಾಯಿತು.ಇದರಿಂದ ತಾನೇ ಮಾಡಿದ ತಪ್ಪಿಗೆ ರಾಜ್ಯ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂತು.
ಈ ವಿಚಾರವನ್ನು ನಮ್ಮ ರಾಜ್ಯ-ರಾಜಕಾರಣಕ್ಕೆ ಅನ್ವಯಿಸಿದರೆ ಮಂಡ್ಯದಲ್ಲಿ ಒಟ್ಟು ಎಂಟು "ಜೆಡಿಎಸ್" ಶಾಸಕರಿದ್ದಾರೆ.ಅವರಲ್ಲಿ ಮೂರು ಮಂತ್ರಿಗಳು. ವಿರೊಧಪಕ್ಷದ ಆಸರೆಯಲ್ಲಿರುವ ಮಂಡ್ಯದ ಗಂಡಿನ ಹೆಂಡತಿ , ಊರಿನ ಗೌಡತಿ ಎಂದೇ ಖ್ಯಾತಿಯಾದ ಸುಮಲತಾ ಅಂಬರೀಶ್ ಎದುರಾಳಿ .ಬಹಿರಂಗವಾಗಿ ಸಹಾಯ ಮಾಡುತ್ತಿರುವ "ಬಿಜೆಪಿ" ಒಂದುಕಡೆಯಾದರೆ, ಅಂತರಂಗದಲ್ಲಿ ವಿದುರನಂತೆ ಸಹಾಯ ಮಾಡುತ್ತಿರುವ "ಕಾಂಗ್ರೆಸ್" ಮತ್ತೊಂದುಕಡೆ.ಇಂತಹಾ ಪರಿಸ್ಥಿತಿಯ ನಡುವೆಯೂ "ಜೆಡಿಎಸ್" ತಾನು ಗೆದ್ದು ತನ್ನ ಕ್ಷೇತ್ರದ ಜೊತೆಗೆ ರಾಜ್ಯವನ್ನು ಉಳಿಸಿಕೊಳ್ಳುತ್ತದೆಯೊ? ಅಥವಾ ಮಂಡ್ಯದ ಜೊತೆಗೆ ರಾಜ್ಯವನ್ನೂ ಕಳೆದುಕೊಳ್ಳುತ್ತದೆಯೋ ಎಂದು ಕಾದುನೊಡಬೇಕಿದೆ.
ಎನೇ ಆಗಲಿ ಮಂಡ್ಯದಲ್ಲಿನ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಲೆ ಇದ್ದು ಅದು ದಿಲ್ಲಿಯವರೆಗೂ ತಲುಪಿರುವದಂತೂ ನಿಜ.ಕೊನೆ ಕ್ಷಣದಲ್ಲಿ ಮತದಾರ ಪ್ರಭುಗಳೇ ನಿರ್ಣಾಯಕ.ಇದರಿಂದ ಆಗುವ ಪರಿಣಾಮ ಇಡೀ ಕರ್ನಾಟಕ ರಾಜ್ಯದ ಮೇಲೆ ಬೀಳಲಿದೆ.ಇದನ್ನು ಅರಿತು ಮಂಡ್ಯ ಮತದಾರ ಮಹಾಪ್ರಭುಗಳು ನಿರ್ಧರಿಸಬೇಕಿದೆ. 


                                                                                                                                                                                                                                                                                                    -ಅಪ್ರಮೇಯ ಕಟ್ಟಿ                 

Comments

Post a Comment