ಅರಗಿನರಮನೆ
ಅರಗಿನರಮನೆ!!! ಮ ಹಾಭಾರತದಲ್ಲಿ ಬರುವ ಅರಗಿನ ಅರಮನೆಯ ಪ್ರಸಂಗವನ್ನು ಮಂಡ್ಯ ದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಹೋಲಿಸುವುದಾದರೆ ಹೇಗೆ ದುರ್ಯೋಧನ ತನ್ನ ಅಣ್ಣ-ತಮ್ಮಂದಿರಾದ ಪಾಂಡವರನ್ನು ಜಾತ್ರೆಗಾಗಿ ವಾರಣಾವತಕ್ಕೆ ಕಳುಹಿಸಿ ಪಾಂಡವರನ್ನು ಸಾಯಿಸಲು ಅರಗಿನ ಅರಮನೆಯನ್ನು ನಿರ್ಮಿಸಿ , ಅಲ್ಲಿ ಪಾಂಡವರನ್ನು ಇರುವಂತೆ ಮಾಡಿ , ತನ್ನ ಮಂತ್ರಿಯಾದ ಪುರೋಚನನನ್ನು ಬಿಟ್ಟು ಪಾಂಡವರನ್ನು ಸಾಯಿಸಲು ಆಜ್ಞಾಪಿಸಲಾಯಿತೋ , ಅದೇ ರೀತಿ ಮಂಡ್ಯದಲ್ಲಿನ ರಾಜಕೀಯ ಸನ್ನಿವೇಶವು ಕಂಡುಬರುತ್ತಿದೆ.ಯಾವರೀತಿ ದುರ್ಯೋಧನ ತನ್ನ ಮಂತ್ರಿಯದ ಪುರೋಚನ ಮತ್ತು ತನ್ನ ಸಂಚಾಲಕರನ್ನು ಕಳುಹಿಸಿ ಪಾಂಡವರನ್ನು ಸಾಯಿಸಲು ಕಳುಹಿಸಿದನೋ ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿ ತನ್ನ ಮಗನನ್ನು ಮತ್ತು ತನ್ನ ಮಂತ್ರಿಗಳನ್ನು ಬಿಟ್ಟು ಮಂಡ್ಯ-ದಲ್ಲಿರುವ ತನ್ನ ವಿರೋಧಿಯನ್ನು ಸೋಲಿಸಲು ಹೊರಟಿದ್ದಾರೆ. ಆದರೆ ಅರಗಿನ ಮನೆಯ ಸನ್ನಿವೇಶದಲ್ಲಿ ಮುಂದಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸದರೆ ದುರ್ಯೊಧನ ತಾನು ಕಳುಹಿಸಿದ ತನ್ನ ಮಂತ್ರಿ ಮತ್ತು ಆತನ ಹಿಂಬಾಲಕರು ಎಷ್ಟೇ ಕಷ್ಟಪಟ್ಟರೂ ಪಾಂಡವರನ್ನು ಸಾಯಿಸ...